Monday, January 7, 2013

ಎಲ್ಲವೂ ಹೇಡಿತನದ ಪರಮಾವಧಿಯೇ!?"ಇಂದು ಹದಿನೈದು ನಿಮಿಷ ಪೊಲೀಸರು ಸುಮ್ಮನಿದ್ದರೆ ಹಿಂದೂಗಳನ್ನು ನಾಶ ಮಾಡಿಬಿಡುತ್ತೇವೆ ಎನ್ನುತ್ತಾನಲ್ಲ ಓವೈಸಿ, ಅವತ್ತು ಗಾಂಧೀಜಿ ಮೂವತ್ತು ಸೆಕೆಂಡು ಸುಮ್ಮನಿದ್ದುಬಿಟ್ಟಿದ್ದರೆ, ಹಿಂದೂಸ್ಥಾನದಲ್ಲಿ ಹೇಡಿ ಹಿಂದುಗಳು ಮಾತ್ರ ಉಳಿದಿರುತ್ತಿದ್ದರು"
ಮಿತ್ರ ತನ್ವೀರ್ ಮಡಿಕೇರಿಯಲ್ಲೊಮ್ಮೆ ಕೇಳಿದ್ದರು, ’ಹಿಂದುಗಳು ಸಂಖ್ಯೆಯಲ್ಲಿ ಹೆಚ್ಚಿದ್ದೀರಿ. ಅಣ್ಣನಂತೆ ನೀವು. ಸ್ವಲ್ಪ ಕೈಗಳನ್ನು ಅಗಲಿಸಿ ಅಪ್ಪಿಕೊಳ್ಳುವ ಪ್ರೀತಿ ತೋರಿದರೆ ನಾವು ಓಡಿಬಂದು ಅಪ್ಪಿಕೊಂಡು ಬಿಡುತ್ತೇವೆ. ನೀವೇಕೆ ಅಷ್ಟು ವಿಶಾಲವಾಗಲಾರಿರಿ?’ ಎಂದು.
’ನಾವು ಬಾಹುಗಳನ್ನು ಅಗಲಿಸಿಕೊಂಡೇ ನಿಂತಿದ್ದೇವೆ. ಮೊದಲೆಲ್ಲ ಬಂದು ಬಂದು ತಬ್ಬಿಕೊಳ್ಳುತ್ತಿದ್ದ ನೀವೇ ಈಗ ದೂರ ನಿಲ್ಲಲು ಶುರು ಮಾಡಿದ್ದೀರಿ; ನಿಮ್ಮ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆಯಲ್ಲ, ಅದಕ್ಕೆ. ನಾವೇನೋ ಅಂದಿಗೂ ಇಂದಿಗೂ ಅಣ್ಣನ ಸ್ಥಾನದಲ್ಲೇ ಇದ್ದೇವೆ. ಆದರೆ ನೀವು ಮಾತ್ರ ತಮ್ಮನ ಸ್ಥಾನವನ್ನು ತೊರೆಯುತ್ತಿದ್ದೀರಿ. ನಮ್ಮೊಡನೆ ಬೆರೆಯಲು ಹಿಂದೇಟು ಹಾಕುತ್ತಿದ್ದೀರಿ’ ಎಂದೆ. ಏನನ್ನಿಸಿತೋ ಏನೋ ತನ್ವೀರ್ ನಕ್ಕು ಸುಮ್ಮನಾಗಿಬಿಟ್ಟರು.
ಇಸ್ಲಾಮ್ ಈ ಜಗತ್ತಿನಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಪಂಥ. ಅದರಲ್ಲಿ ಎರಡು ಮಾತೇ ಇಲ್ಲ. ಈ ಕಾರಣದಿಂದಲೇ ವ್ಯಾಟಿಕನ್‌ನ ಕ್ರಿಸ್ತ ಪಡೆ ಬೆಚ್ಚಿ ಕುಳಿತಿದೆ. ಹೀಗಾಗಿಯೇ ಇಸ್ಲಾಮ್ ರಾಷ್ಟ್ರಗಳ ನಡುವೆ ಕದನ ತೀವ್ರಗೊಳಿಸಿ ಸಂಖ್ಯೆ ಕಡಿಮೆ ಮಾಡುವ ಹುನ್ನಾರವನ್ನು ಅದು ಮಾಡುತ್ತಲೇ ಇದೆ. ಬಹುಶಃ ಸಾವಿರಾರು ವರ್ಷಗಳಿಂದ ಹೀಗೆ ಎತ್ತಿಕಟ್ಟುವ ಕೆಲಸ ಮಾಡಿದ್ದರಿಂದಲೋ ಏನೋ ಇಂದು ಚಿಂತನಶೀಲ ಕ್ರಿಸ್ತ ಸಮಾಜ, ಚಿಂತನಿಗೆ ಅವಕಾಶವೇ ಇಲ್ಲದ ಇಸ್ಲಾಮಿನತ್ತ ಹೊರಳಿಕೊಳ್ಳಲು ಆರಂಭಿಸಿದೆ.
ಅದೆಲ್ಲ ಬಿಡಿ, ಈಗ ಪ್ರಶ್ನೆ ಅಕ್ಬರುದ್ದಿನ್ ಓವೈಸಿಯದು. ಹೈದರಾಬಾದಿನ ನಟ್ಟನಡುವೆ ನಿಂತು ಹಿಂದುತ್ವವನ್ನೂ ಹಿಂದೂ ದೇವತೆಗಳನ್ನೂ ಹಿಂದೂ ನಾಯಕರನ್ನೂ ಕೊನೆಗೆ ಭಾರತವನ್ನೂ ಅತಿ ಹೀನ ಪದಗಳಲ್ಲಿ ನಿಂದಿಸಿದ್ದಾನಲ್ಲ, ಇದು ಸಾಮೂಹಿಕ ಅತ್ಯಾಚಾರಕ್ಕಿಂತ ಭೀನ್ನವಾದ್ದೇನೂ ಅಲ್ಲ. ಓವೈಸಿಯ ಮದವೇರಲು ಕಾರಣವಾಗಿದ್ದು ಸಂಖ್ಯೆಯೇ, ಅನುಮಾನವಿಲ್ಲ. ’ನಾವೀಗ ಇಪ್ಪತ್ತೈದು ಕೋಟಿಯಾಗಿದ್ದೇವೆ’ ಎನ್ನುವುದು ಅವನ ಎಚ್ಚರಿಕೆಯ ಸಂದೇಶ. ಇಷ್ಟು ಸಂಖ್ಯೆಯ ಮುಸಲ್ಮಾನರು ನೂರು ಕೋಟಿ ಹಿಂದೂಗಳನ್ನು ನಾಶ ಮಾಡುವುದು ಕಠಿಣವಲ್ಲ. ಏಕೆಂದರೆ ಹಿಂದುಗಳು ಹೇಡಿಗಳು – ಇದು ಅವನ ಭಾಷಣದ ಒಟ್ಟಾರೆ ಸಾರಾಂಶ.
ಅಕ್ಬರುದ್ದಿನ್ ಓವೈಸಿ
ಅಕ್ಬರುದ್ದಿನ್ ಓವೈಸಿ
ಅವನು ಹೇಳಿದ್ದು ತಪ್ಪೇನಲ್ಲ ಬಿಡಿ. ಮಹಮ್ಮದ್ ಘೋರಿ ತರೈನ್ ಯುದ್ಧದಲ್ಲಿ ಮೊದಲ ಬಾರಿಗೆ ಪೃಥ್ವಿರಾಜ್ ಚೌಹಾನರೆದುರು ಸೋತನಲ್ಲ, ಅವತ್ತೇ ಅವನ ತಲೆ ಕಡಿದು ಹಾಕಬೇಕಿತ್ತು. ಪೃರ್ಥವಿರಾಜರಿಗೆ ಶಾಂತಿಮಂತ್ರಗಳು ನೆನಪಾದವು, ಬದುಕಲು ಬಿಟ್ಟುಬಿಟ್ಟರು. ಮರುವರ್ಷ ಅದೇ ಘೋರಿ ಮೋಸದಿಂದ ಪೃಥ್ವಿರಾಜರನ್ನು ಸೋಲಿಸಿ, ಬಂಧಿಸಿ, ಕೊಂದ. ನಿಜ. ಅಂತಹಾ ಕ್ರೂರ ಜಂತುವಿಗೆ ಪ್ರಾಣದಾನ ಮಾಡಿದ್ದು ಚೌಹಾನರ ಹೇಡಿತನವೇ.
ರಾಣಿ ಪದ್ಮಿನಿಯನ್ನು ತನ್ನವಳಾಗಿಸಿಕೊಳ್ಳಬೇಕೆಂದು ಹಟ ಹಿಡಿದು ಆಕ್ರಮಣ ಮಾಡಿದ್ದ ಅಲ್ಲಾ ಉದ್ದಿನ್ ಖಿಲ್ಜಿಯನ್ನು ಸೋಲಿಸಿ ಬಂಧಿಸಿದ ಚಿತ್ತೋರಿನ ರಾಜ ರಾವಲ್ ರತನ್ ಸಿಂಗ್, ಆಗಲೇ ತಲೆ ಒಡೆದು ಬಿಡಬೇಕಿತ್ತು. ಗೆಳೆತನದ ನಾಟಕವಾಡಿದ ಖಿಲ್ಜಿಗೆ ತನ್ನ ರಾಣಿಯ ಮುಖವನ್ನು ಕನ್ನಡಿಯಲ್ಲಿ ತೋರಿಸಿ ಕಳುಹಿಸಿಬಿಟ್ಟ. ಅಲ್ಲಾವುದ್ದೀನನ ಕಾಮಜ್ವಾಲೆ ಧಗಧಗನೆ ಉರಿಯಿತು. ಆತ ಮೋಸಗೈದ. ಗೆಳೆಯನ ಸೋಗಿನಲ್ಲಿ ರತನ್ ಸಿಂಗನನ್ನು ಕರೆಸಿಕೊಂಡು ಕೊಂದ. ರಾಣಿ ಪದ್ಮಿನಿ ಮಾನವನ್ನು ಹರಾಜಿಗಿಡಲು ಒಪ್ಪದೆ ಉರಿಯುವ ಅಗ್ನಿ ಕುಂಡಕ್ಕೆ ಹಾರಿ ಪ್ರಾಣಾರ್ಪಣೆಗೈದಳು. ಹೌದಲ್ಲವೆ? ಅಲ್ಲಾವುದ್ದಿನ್‌ನಂಥವನಿಗೂ ಕ್ಷಮೆಯ ಭಿಕ್ಷೆ ನೀಡಿದ ನಾವು ಹೇಡಿಗಳೇ.
ಹಿಂದೂ ಹೆಣ್ಣುಮಕ್ಕಳೆಂದರೆ ಮುಸಲ್ಮಾನ ದೊರೆಗಳಿಗೆ ಕಾಲ ಕಸ. ಅವರು ಸುಂದರಿಯರಾಗಿದ್ದರೆ ಒಂದೋ ಜನಾನಾದ ಸೇವಕಿಯರಾಗಬೇಕಿತ್ತು, ಇಲ್ಲವೇ ಕಾಮದ ಹಸಿವಿಂಗಿಸುವ ದಾಸಿಯರಾಗಬೇಕಿತ್ತು. ತನ್ನ ಗಡಿಭಾಗದ ಅನೇಕ ಹಿಂದು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರಕ್ಕೆ ಕಾರಣವಾಗಿದ್ದ ಮುಸಲ್ಮಾನ ರಾಜನ ಮನೆಯ ಹೆಣ್ಣುಮಗಳೊಬ್ಬಳು ಸೆರೆ ಸಿಕ್ಕಾಗ ಶಿವಾಜಿ ಮಹಾರಾಜರು ಆಕೆಯನ್ನು ಗೌರವಿಸಿ, ಜತನದಿಂದ ಕಾಪಾಡಿ, ಉಡುಗೊರೆಗಳನ್ನಿತ್ತು, ಸೋದರಿಯೆಂದು ಗೌರವಿಸಿ ಕಳುಹಿಸಿದರಲ್ಲ! ಶಿವಾಜಿಯೂ ಕೈಲಾಗದಿದ್ದವರು. ಹೌದು.. ಓವೈಸಿಯ ದೃಷ್ಟಿಯಲ್ಲಿ ಶಿವಾಜಿಯೂ ಕೈಲಾಗದವರೇ. ಹತ್ತು ಹಿಂದೂಗಳಿಗೆ ಒಂದು ಮಗುವನ್ನು ಹುಟ್ಟಿಸುವ ತಾಕತ್ತು ಇಲ್ಲವೆಂದು ಅವನು ಹೇಳಿದ್ದು ಅದೇ ದೃಷ್ಟಿಯಿಂದ ಇರಬೇಕು. ಆ ದಿಕ್ಕಿನಲ್ಲಿ ನೋಡಿದರೆ ನಾವು ಹೇಡಿಗಳೇ.
ಅದು ಬಿಡಿ, ಸ್ವಾತಂತ್ರ್ಯದ ಹೊಸ್ತಿಲಲ್ಲಿ ಆನಂದಿಸಬೇಕಾದ ಹೊತ್ತಿನಲ್ಲಿ ಜಿನ್ನಾ ಬೆನ್ನಿಗೆ ಚೂರಿ ಇರಿದ, ನಾವು ತಾಯಿಯೆಂದು ಕರೆಯುತ್ತಿದ್ದ ಭೂಮಿಯನ್ನು ತುಂಡರಿಸಿದ. ಅವತ್ತಿನ ಜನರಿಗಿರಲಿ, ಇಂದಿನವರಿಗೂ ಕೂಡ ಅದನ್ನು ನೆನೆದರೆ ಹೃದಯ ಕತ್ತರಿಸಿ ಬಿಸಾಡಿದ ಅನುಭವ. ಜಿನ್ನಾ ಬಾಯಿಬಿಟ್ಟು ಅವತ್ತೇ ಹೇಳಿದ್ದ, ’ಪಾಕಿಸ್ತಾನ್ ಮುಸಲ್ಮಾನೋಂ ಕಾ’. ಅವನು ತಾನು ಹೇಳಿದಂತೆಯೇ ನಡೆದುಕೊಂಡ. ಅಲ್ಲಿಂದ ಹಿಂದುಗಳನ್ನು ಸಾರಾಸಗಟಾಗಿ ಓಡಿಸಿದ. ನಾವು ಮಾತ್ರ ಜಿನ್ನಾನ ಮಾತುಗಳಿಗೆ ಜಾಣ ಕಿವುಡುತನ ತೋರಿದೆವು. ನಮ್ಮದೇ ರಕ್ತ ಭಾರತದ ಮುಸಲ್ಮಾನರಲ್ಲೂ ಇದೆಯೆಂದೆವು. ನೀವು ಹೋಗಬೇಡಿ, ಇಲ್ಲಿಯೇ ಉಳಿಯಿರಿ ಎಂದು ಗೋಗರೆದು ಮನವೊಲಿಸಿದೆವು. ಮುಸಲ್ಮಾನರು ಇಲ್ಲಿಂದ ತೊರೆದು ಹೋದ ಮನೆಗಳನ್ನು ಪಾಕಿಸ್ತಾನದ ನಿರಾಶ್ರಿತ ಹಿಂದೂಗಳಿಗೆ ನೀಡದೆ, ಇಲ್ಲಿನ ಮುಸಲ್ಮಾನರಿಗೇ ಕೊಡಿಸಿದೆವು. ಅಲ್ಲಲ್ಲಿ ಪ್ರತಿರೋಧಗಳು ಕಂಡುಬಂದವಾದರೂ ಬಹುಸಂಖ್ಯೆಯ ಹಿಂದುಗಳು ನೊಂದ ಮುಸಲ್ಮಾನರ ಪರವಾಗಿಯೇ ಇದ್ದರು. ಹೌದಲ್ಲವೆ ಮತ್ತೆ? ಅವತ್ತು ನಮ್ಮವರು ಮುಸಲ್ಮಾನರನ್ನು ನಿಷ್ಕಲ್ಮಷವಾಗಿ ಪ್ರೀತಿಸಿದ್ದು, ಅಲ್ಪಸಂಖ್ಯಾತರೆನ್ನುವ ಸ್ಥಾನಮಾನಗಳನ್ನು ನೀಡಿದ್ದು, ಮೀಸಲಾತಿ ನೀಡಿ ಅವರ ಬೆಳವಣಿಗೆಗೆ ಸಹಕರಿಸಿದ್ದು, ಎಲ್ಲವೂ ಹೇಡಿತನದ ಪರಮಾವಧಿಯೇ!
ಇಂದು ಹದಿನೈದು ನಿಮಿಷ ಪೊಲೀಸರು ಸುಮ್ಮನಿದ್ದರೆ ಹಿಂದೂಗಳನ್ನು ನಾಶ ಮಾಡಿಬಿಡುತ್ತೇವೆ ಎನ್ನುತ್ತಾನಲ್ಲ ಓವೈಸಿ, ಅವತ್ತು ಗಾಂಧೀಜಿ ಮೂವತ್ತು ಸೆಕೆಂಡು ಸುಮ್ಮನಿದ್ದುಬಿಟ್ಟಿದ್ದರೆ, ಹಿಂದೂಸ್ಥಾನದಲ್ಲಿ ಹೇಡಿ ಹಿಂದುಗಳು ಮಾತ್ರ ಉಳಿದಿರುತ್ತಿದ್ದರು. ಓವೈಸಿ ಮತ್ತು ಬಂಧು ಮಿತ್ರರು ಪಾಕಿಸ್ತಾನದಲ್ಲಿ ನೆಮ್ಮದಿಯಿಂದ ಬದುಕಿರುತ್ತಿದ್ದರು.
ಅದು ಬಿಡಿ. ಬಹುಸಂಖ್ಯಾತ ಹಿಂದುಗಳ ನಾಡಿನಲ್ಲಿ ಕಾಶ್ಮೀರದ ಹಿಂದುಗಳು ನಿರಾಶ್ರಿತರಾದರು, ಅತಂತ್ರರಾದರು. ಬಾಂಗ್ಲಾದ ನುಸುಳುಕೋರರಿಂದಾಗಿ ಈಶಾನ್ಯ ರಾಜ್ಯಗಳ ಜನಸಂಖ್ಯೆಯ ಅಂಕಿಅಂಶಗಳೇ ಏರುಪೇರಾಗಿಬಿಟ್ಟವು. ಬಿಹಾರ, ಯುಪಿ, ಬಂಗಾಳಗಳಲ್ಲಿ ಮುಸ್ಲಿಮರ ಸಂಖ್ಯೆ ಅಧಿಕವಾಗಿದೆಯೆನ್ನುವ ಕಾರಣಕ್ಕೇ ಹಿಂದುಗಳ ದನಿಯಡಗುವ ಸ್ಥಿತಿ ಉಂಟಾಯ್ತು. ಇಷ್ಟಾಗಿಯೂ ಇತರ ರಾಜ್ಯಗಳಲ್ಲಿ ಬಹುಸಂಖ್ಯಾತ ಹಿಂದೂಗಳು ಅಲ್ಪಸಂಖ್ಯಾತ ಮುಸಲ್ಮಾನರ ಮೇಲೆ ಎಗರಾಡಲಿಲ್ಲ. ಹೌದಪ್ಪಾ, ಆ ಹಿಂದುಗಳೆಲ್ಲ ಪರಮಹೇಡಿಗಳೇ.
ಯಾವುದೋ ದೇಶದಲ್ಲಿ ಮಹಮ್ಮದರ ಕಾರ್ಟೂನು ಕೆಟ್ಟದಾಗಿ ಬರೆದರೆಂಬ ಕಾರಣಕ್ಕೆ ಬೆಂಗಳೂರಿನ ಶಿವಾಜಿನಗರದಲ್ಲಿ, ಹುಬ್ಬಳ್ಳಿಯಲ್ಲಿ ಪ್ರತಿಭಟನೆಗಳಾದವು. ಬರ್ಮಾದ ಘಟನೆಯನ್ನು ಎದುರಿಟ್ಟುಕೊಂಡು ಅಮರ್ ಜವಾನ್ ಸ್ಮಾರಕವನ್ನು ಒದ್ದು ಪುಡಿಪುಡಿಗೈದಿರಿ. ಉತ್ತರ ಪ್ರದೇಶದಲ್ಲಿ ನಮಜು ಮುಗಿಸಿಬಂದು, ಬುದ್ಧನ ಶಿಲಾಪ್ರತಿಮೆಗೆ ಕಲ್ಲು ಹೊಡೆದು ಹಾನಿಗೈದಿರಿ. ಅರೆ! ನಾವದನ್ನು ಮರೆತೇಬಿಟ್ಟಿದ್ದೀವಲ್ಲ! ನಮ್ಮಲ್ಲಿ ಕೆಲವರು ಅದೆಲ್ಲ ನಿಮಗಾಗಿರುವ ನೋವಿನ ವ್ಯಕ್ತ ರೂಪವದು ಎಂದರು. ಹೌದಿರಬೇಕೆಂದು ನಾವೂ ಸುಮ್ಮನಾಗಿಬಿಟ್ಟೆವು. ಅದೆಂತಹ ಹೇಡಿಗಳಪ್ಪಾ ನಾವು..
ಆದರೆ, ನಮ್ಮಂಥ ಈ ಪರಮ ಹೇಡಿಗಳು ನಡುವಲ್ಲೊಮ್ಮೆ ಧಿರತನ ತೋರಿ ನಾವು ಪೂಜಿಸುವ ಮಂದಿರದ ಜಾಗದಲ್ಲಿ ತಲೆಯೆತ್ತಿದ್ದ ಮಸೀದಿಯನ್ನು ಹೊಡೆದುರುಳಿಸಿದ್ದು ಮಾತ್ರ ನೀವು ಮರೆಯುವುದೇ ಇಲ್ಲ. ನಮ್ಮಂತಹ ನಿರ್ವೀರ್ಯರು ನಮ್ಮವರನ್ನು ರೈಲಿನೊಳಗೆ ಬಂಧಿಸಿ, ಬೆಂಕಿ ಹೊತ್ತಿಸಿದ ಆಕ್ರೋಶಕ್ಕೆ ಗುಜರಾತಿನಲ್ಲಿ ತಿರುಗಿಬಿದ್ದೆವಲ್ಲ, ಅದು ನಿಮ್ಮ ಪಾಲಿಗೆ ಘೋರ ದುರಂತ. ಓವೈಸಿ ಹೇಳಿದಂತೆ ಆ ನಿಮ್ಮ ಅಮಾಯಕ ಕಸಬ್, ನೂರಾರು ಜನರ ಮೇಲೆ ಎರ್ರಾಬಿರ್ರಿ ಗುಂಡು ಹಾರಿಸಿದ್ದನ್ನು ಸಮರ್ಥಿಸಿಕೊಳ್ಳುತ್ತೀರಿ. ಅಂತಹ ಘಟನೆಗಳನ್ನು ನೋಡೀನೋಡೀ ಒಬ್ಬ ಸಾಧ್ವಿ ಪ್ರಜ್ಞಾ ಸಿಂಗಳ ತಲೆ ಕೆಟ್ಟರೆ ನಿಮಗೆ ಸಹಿಸೋಕೆ ಸಾಧ್ಯವಿಲ್ಲ ಅಲ್ಲವೆ?
ಪೀಸ್ ಟೀವಿ ಎಂಬ ಹೆಸರಿನಲ್ಲಿ ಝಾಕಿರ್ ನಾಯಕ್ ಪ್ರತಿನಿತ್ಯ ಹಿಂದೂ ದೇವತೆಗಳ, ಧರ್ಮದ ಅವಹೇಳನ ಮಾಡ್ತಾನೆ. ತರ್ಕಬದ್ಧವಾಗಿ ನಾವೂ ಅದನ್ನೆ ಮಾಡೋಣವೇನು? ಪಂಡಿತರಿಗೆ ನಮ್ಮಲ್ಲೂ ಕೊರತೆಯೇನಿಲ್ಲ ನೆನಪಿರಲಿ. ಶಾಂತಿಯ ಹೆಸರಿನ ಪಂಥದವರು ಅದೇ ಝಾಕಿರ್ ನಾಯಕನ ವಿಡಿಯೋಗಳನ್ನು ಬೆಂಗಳೂರಿನ ಅರಮೆ ಮೈದಾನದ ಪುಸ್ತಕ ಮೇಳದಲ್ಲಿ ಹಾಕಿಕೊಂಡು ಇಪ್ಪತ್ನಾಲಕ್ಕು ಗಂಟೆ ಹಾಕಿಕೊಂಡು ಪ್ರಚಾರ ಮಾಡುತ್ತಿದ್ದರಲ್ಲ, ಆಗಲೂ ನಾವು ಸುಮ್ಮನಿದ್ದಿದ್ದು ತಪ್ಪಾ?
ಅರಬ್ ರಾಷ್ಟ್ರಗಳಲ್ಲಿ ಹಿಂದೂ ದೇವತೆಗಳ ಚಿತ್ರಗಳಿರುವ ಪುಸ್ತಕಗಳನ್ನು ಮಾರಾಟಕ್ಕೆ ಮುನ್ನ ಮಸಿ ಬಳಿದು ತರುತ್ತಾರಲ್ಲ, ಅಂತಹ ಮತಾಂಧತೆ ನಮ್ಮಲ್ಲಿದ್ದಿದ್ದರೆ ನಿಮ್ಮ ಕಥೆ ಏನಾಗುತ್ತಿತ್ತು ಯೋಚಿಸಿದ್ದೀರಾ? ಮಿಸ್ಟರ್ ಓವೈಸಿ, ಚೆನ್ನಾಗಿ ಅರ್ಥ ಮಾಡಿಕೋ. ಯಾವುದು ಆಘಾತಗಳನ್ನು ಸಹಿಸಿಕೊಂಡು ಎದುರಿಸಬಲ್ಲದೋ ಅದು ಶಾಶ್ವತವಾಗಿ ನಿಲ್ಲುತ್ತದೆ. ಹಿಂದೂ ಧರ್ಮ ಗ್ರೀಕರಿಂದ ಹಿಡಿದು ಮೊಘಲರ ವರೆಗೆ, ಪೋರ್ಚುಗೀಸರಿಂದ ಶುರುಮಾಡಿ ಪಾಕಿಸ್ತಾನದವರೆಗೆ ಅನೇಕರನ್ನು ನುಂಗಿ ನೀರು ಕುಡಿದಿದೆ. ಇದಕ್ಕೆ ನೀನು ಅದ್ಯಾವ ಲೆಕ್ಕ? ವ್ಯಕ್ತಿಯನ್ನು ಬದಲಿಸಲು ನಮಗೆ ಬಂದೂಕಾಗಲೀ ಕತ್ತಿಯಾಗಲೀ ಬೇಡವೆಂದು ಗೊತ್ತಿರಲಿ. ಉಪನಿಷತ್ತಿನ ವಾಣಿಗಳಿಂದ ದಾರಾಷಿಕೋನಂಥವನನ್ನು ಪರಿವರ್ತಿಸಿ ಮಹಾಚೇತನವನ್ನಾಗಿಸಿದ ಸಾಧನೆ ನಮ್ಮದು. ಹತ್ತಾರು ಸಾವಿರ ಪುರಾತನವಾದ ಹಿಂದೂ ಧರ್ಮ ವೃಕ್ಷದ ಪಾಲಿಗೆ ನೀನೊಬ್ಬ ರೆಂಬೆಗೆ ಜೋತಾಡುವ ಬೇತಾಳವಾಗಬಹುದೆ ಹೊರತು ಅದಕ್ಕಿಂತ ಹೆಚ್ಚಲ್ಲ! ನೆನಪಿರಲಿ.

5 comments:

Anonymous said...

wclnaalko 113 xkdzmwesy http://www.chaussures-louboutin-france.com rqtnkvfwp 965 iyhlcvxft [url=http://www.chaussures-louboutin-france.com]Louboutin[/url] suhtavmsl 077 xqtpypaew
bpvbjxlwn 196 gojuhaeoz http://www.acheterchristianlouboutinpascher.net qugpkcdqa 862 tnjtlcrzq [url=http://www.acheterchristianlouboutinpascher.net]chaussures christian louboutin[/url] ggjdvpean 129 uiuahjmsj
jomvfwfqe 816 kmkcgvtdu http://www.acheterchristianlouboutinpascher.com ylrjmpyux 673 gghnvbzyd [url=http://www.acheterchristianlouboutinpascher.com]chaussures louboutin[/url] rejwltvli 753 jjqdglupp
slprlizbk 709 imopbwgcq http://www.chaussures-louboutinsoldes.net mrfjfghme 088 tqaplxeqe [url=http://www.chaussures-louboutinsoldes.net]Louboutin[/url] bwwzqswpq 868 echgjfdbo
sznhhsuku www.gafasraybans.es mtgnrxlwf [url=http://www.gafasraybans.es]ray ban baratas lxksanmub

Anonymous said...

Wow, fantastic blog format! How long have you ever been blogging for?
you make running a blog glance easy. The
entire glance of your web site is fantastic, let alone the content material!


Also visit my blog post - click for labrador vs retriever info

Anonymous said...

Thanks for ones marvelous posting! I definitely enjoyed reading it, you could be a great author.
I will always bookmark your blog and will eventually come back someday.

I want to encourage you continue your great work, have a nice
weekend!

my webpage: More Helpful Hints

Anonymous said...

Very quickly this site will be famous among all blogging viewers, due
to it's good content

my blog post - Check This Out

Anonymous said...

Thanks for sharing your info. I truly appreciate your efforts and I will
be waiting for your further write ups thank you once
again.

Feel free to surf to my site - terrific miniature golden retrievers details

Share

Twitter Delicious Facebook Digg Stumbleupon Favorites More