Wednesday, December 15, 2010
ಭಾರತ ಮೂರನೇ ಸೂಪರ್ ಪವರ್ ದೇಶ
ಭಾರತವು ಅಮೆರಿಕ , ಚೀನಾ ಬಳಿಕ ವಿಶ್ವದ ಮೂರನೇ ಅತ್ಯಂತ ಶಕ್ತಿಶಾಲಿ ದೇಶವಾಗಿದೆ ಮತ್ತು ಅಮೆರಿಕ, ಚೀನಾ, ಯುರೋಪ್ ಒಕ್ಕೂಟದ ಬಳಿಕ ನಾಲ್ಕನೇ ಅತ್ಯಂತ ಶಕ್ತಿಶಾಲಿ ಕೂಟವಾಗಿದೆ ಎಂಬುದಾಗಿ ಅಮೆರಿಕದ ಹೊಸ ವರದಿಯೊಂದು ಹೇಳಿದೆ.ದುರ್ಬಲ ನಾಯಕತ್ವದ ಕಾರಣದಿಂದ ವ್ಯವಸ್ಥೆಯ ದೋಷಗಳ ಹೊರತಾಗಿಯೂ ಭಾರತ ಈ ಸ್ಥಾನಕ್ಕೇರಿರುವುದು ಮುಂದಿನ ಶತಮಾನ 'ಭಾರತದ ಶತಮಾನ' ಎಂಬ ಚಿಂತಕರ ಭವಿಷ್ಯವಾಣಿಯ ನಡುವೆಯೇ ಈ ವರದಿ ಬಂದಿದೆ.2025ರ ವೇಳೆ ವಿಶ್ವದಲ್ಲಿ ಭಾರತದ ಪಾತ್ರ ಇನ್ನಷ್ಟು ವೃದ್ಧಿಸಲಿದೆ ಎಂದು Global Governance 2025 ವರದಿಯಲ್ಲಿ ತಿಳಿಸಲಾಗಿದೆ. ಇದನ್ನು ಅಮೆರಿಕದ ನೇಷನಲ್ ಇಂಟೆಲಿಜೆನ್ಸ್ ಕೌನ್ಸಿಲ್ ಮತ್ತು ಯುರೋಪಿಯನನ್‌ಯೂನಿಯನ್ ಇನ್‌ಸ್ಟಿಟ್ಯೂಟ್ ಫಾರ್ ಸೆಕ್ಯುರಿಟಿ ಸ್ಟಡೀಸ್(EUISS)ಜಂಟಿಯಾಗಿ ತಯಾರಿಸಿದೆ.ಈ ವರದಿ ತಯಾರಿಯಲ್ಲಿ ರಷ್ಯಾ, ಬ್ರೆಜಿಲ್, ಭಾರತ, ಚೀನಾಗಳಿಂದಲೂ ತಜ್ಞರನ್ನು ಬಳಸಿಕೊಳ್ಳಲಾಗಿತ್ತು.ಮುಂದಿನ 25ವರ್ಷಗಳಲ್ಲಿ ಜಾಗತಿಕ ಶಕ್ತಿಗಳನ್ನು ಗುರುತಿಸಲು ಈ ವರದಿ ತಯಾರಾಗಿದೆ. 2010ರಲ್ಲಿ ಅಮೆರಿಕ ಶಕ್ತಿಶಾಲಿ ದೇಶವಾಗಿ ಉಳಿಯಲಿದೆ. ಇದು ವಿಶ್ವ ಆಡಳಿತದ ಶೇ.22 ರಷ್ಟನ್ನು ಒಳಗೊಂಡಿದೆ.ಚೀನಾ ಮತ್ತು ಯುರೋಪಿಯನ್ ಯೂನಿಯನ್ ತಲಾ ಶೇ.16 ರಷ್ಟನ್ನು ಹೊಂದಿದ್ದರೆ, ಭಾರ ಶೇ.8 ರಷ್ಟನ್ನು ಹೊಂದಿದೆ. 2025ರ ವೇಳೆಗೆ ಅಂತಾರಾಷ್ಟ್ರೀಯ ಭವಿಷ್ಯವನ್ನು ಮುಂಗಾಣುವ ವರದಿಯಂತೆ, ಅಮೆರಿಕ, ಯುರೋಪ್, ಜಪಾನ್, ರಶ್ಯಾದ ಬಲ ಕುಸಿಯಲಿದ್ದರೆ, ಚೀನಾ, ಭಾರತ. ಬ್ರೆಜಿಲ್ ಬಲ ವೃದ್ಧಿಸಲಿದೆ. ಆದರೂ ಅಮೆರಿಕ ವಿಶ್ವದ ಅತ್ಯಂತ ಬಲಾಢ್ಯ ದೇಶವಾಗಿಯೇ ಉಳಿಯಲಿದೆ . ಆದರೆ ಇದು ಶೇ.18ರಷ್ಟೇ ಜಾಗತಿಕ ಶಕ್ತಿಯ ಪ್ರಭಾವ ಹೊಂದಿರಲಿದೆ.ಚೀನಾ ಶೇ.16, ಯುರೋಪಿಯನ್ ಯೂನಿಯನ್ ಶೇ.14, ಭಾರತ ಶೇ.10ರ ಬಲವನ್ನು ಹೊಂದಿರತ್ತದೆ ಎಂಬುದು ವರದಿಯ ಲೆಕ್ಕಾಚಾರ. ವರದಿ ತಯಾರಿಕೆಯಲ್ಲಿ ವಾತಾವರಣ ಬದಲಾವಣೆ, ಜನಾಂಗೀಯ ಮತ್ತು ಪ್ರಾದೇಶಿಕ ಸಂಘರ್ಷ, ಹೊಸ ತಂತ್ರಜ್ಞಾನ, ನೈಸರ್ಗಿಕ ಸಂಪನ್ಮೂಲ ನಿರ್ವಹಣೆಯಂತಹ ಅಂಶಗಳನ್ನು ಪರಿಗಣಿಸಲಾಗಿದೆ. ಪರಿಣಾಮಕಾರಿ ಜಾಗತಿಕ ಆಡಳಿತ ಮುಖವನ್ನು ಪ್ರಮುಖವಾಗಿ ಪರಿಗಣಿಸಲಾಗಿದೆ.
Subscribe to:
Post Comments (Atom)
No comments:
Post a Comment